Thursday, July 9, 2009
ಕವನ- ಮಾಯಾ ಏಂಜೆಲೊ
ಅನುವಾದ : ಹನಿ
ನಾನು ತರುಣಿಯಾಗಿದ್ದಾಗ
ಪರದೆಯ ಹಿಂದೆ ನಿಂತು ನೋಡುತ್ತಿದ್ದೆ.
ಗಂಡಸರು ಬೀದಿಯ ತುದಿಯಿಂದ ತುದಿಗೆ
ಅಡ್ಡಾಡುತ್ತಿದ್ದರು. ಹುಡುಗರು, ಮುದುಕರು.
ಸಾಸಿವೆಯಂತೆ ಚುರುಕಾದ ತರುಣರು.
ನೋಡಿ ಬೇಕಾದರೆ, ಗಂಡಸರು ಯಾವಾಗಲೂ
ಎಲ್ಲಿಗೋ ಹೋಗುತ್ತಿರುತ್ತಾರೆ.
ನಾನಲ್ಲಿ ಇದ್ದೇನೆಂದು ಅವರಿಗೆ ಗೊತ್ತಿತ್ತು.
ಷೋಡಶಿ, ಪುರುಷನಿಗಾಗಿ ಹಸಿದವಳು
ನನ್ನ ಕಿಟಕಿಯ ಕೆಳಗೆ ಅವರ ನಿಟ್ಟುಸಿರು
ಯುವತಿಯ ಸ್ತನಗಳಂತೆ ಚೂಪೆದ್ದ ಅವರ ಭುಜಗಳು
ಪೃಷ್ಠಗಳ ಮೇಲೆ ಬಡಿದುಕೊಳ್ಳುವ ಮೇಲಂಗಿಯ
ತುದಿಗಳು, ಗಂಡಸರು.
ಒಂದು ದಿನ ಅವರು ಕೈ ಗರಿಗಳ ಚಾಚಿ ನಿಮ್ಮ ಹಿಡಿಯುವರು
ಈ ಜಗದ ಕೊಟ್ಟ ಕೊನೆಯ ಒಡೆಯದ ತತ್ತಿಯೋ ಎಂಬಂತೆ.
ಬಳಿಕ ಬಿಗಿಯುವರು, ಕೊಂಚ.
ಮೊದಲ ಹಿಂಡುವಿಕೆ ಹಿತ. ತಟ್ಟನೆ ಒಂದಪ್ಪುಗೆ.
ರಕ್ಷಣೆಯಿಲ್ಲದ ನಿಮ್ಮಾಳದೊಳಕ್ಕೆ ಮೆತ್ತಗೆ. ಇನ್ನಷ್ಟು.
ನೋವು ತೊಡಗುವುದು. ಭಯ ಸುತ್ತುವರಿದ ನುಲಿತ, ನಗು.
ಗಾಳಿಯೇ ಸ್ತಬ್ಧ. ಪ್ರಜ್ಞೆ ಉಕ್ಕುಕ್ಕಿ ಭಯದ ಸಿಡಿತ.
ಉರಿವ ಮೋಂಬತ್ತಿ, ಪುಡಿಪುಡಿ ಗಾಜು.
ಅವರ ಕಾಲುಗಳಲ್ಲಿ ಹರಿಯುವುದು, ಶೂಗಳ ಒದ್ದೆಯಾಗಿಸುವುದು
ನಿಮ್ಮದೇ ಜೀವರಸ.
ಲೋಕದ ಅರಿವು ಮರಳಿದಾಗ
ನಾಲಗೆಗೆ ರುಚಿ ಹಿಂದಿರುಗಲು ಯತ್ನಿಸುವಾಗ
ನಿಮ್ಮ ದೇಹ ಟಪ್ಪನೆ ಮುಚ್ಚಿಕೊಳ್ಳುವುದು. ಎಂದೆಂದಿಗೂ.
ಕೀಲಿಗಳೆ ಇಲ್ಲವಾಗುವುವು.
ನಂತರ ನಿಮ್ಮ ತಲೆತುಂಬ ಕಿಟಕಿ ತೆರೆದುಕೊಳ್ಳುವುದು.
ಅಲ್ಲಿ, ತೂಗಾಡುವ ಪರದೆಗಳ ಆಚೆ, ಗಂಡಸರು ನಡೆದಾಡುವರು.
ಏನನ್ನೋ ತಿಳಿಯುತ್ತ, ಎತ್ತಲೋ ಹೋಗುತ್ತ.
ಆದರೆ ಈಗ ನಾನು,
ಸುಮ್ಮನೆ ನಿಂತು ನೋಡುವೆ.
ಬಹುಶಃ .
Subscribe to:
Post Comments (Atom)
ನಂಗೆ ಮಾಯ ಎಂಜಲೋ ಯಾರೂ ಅಂತ ಗೊತ್ತಿಲ್ಲ ಹನಿ ಅವರೆ ಆದರೆ ನಿಮ್ಮ ಅನುವಾದ ಹಿಡಿಸಿತು, ಆಮೇಲೆ ಇನ್ನೊಂದು ವಿಶಯ ಕಳ್ಳರು, ಕದೀಮರ ಬಗ್ಗೆ ಯೋಚಿಸೋದೆ ಬೇಡ ನಾವು ನಮಗೆ ಬೇಕಾದ್ದನ್ನು ಬರೆಯುತ್ತಾ ಇರೋಣ.. ಅಲ್ವಾ...
ReplyDeleteABBA! WOW!
ReplyDeletetrgeetha90@gmail.com
great!
ReplyDeleteAnuvaada Chennagide..
ReplyDeletenice poem, good trasalation
ReplyDelete-Harish kera
ಅನುವಾದ ಚೆನ್ನಾಗಿದೆ... ಆ ಕವಿತೆ ಬರೆದವರ ಬಗ್ಗೆ ಮಾಹಿತಿ ಮತ್ತು ಮೂಲ ಕವಿತೆಯನ್ನು ಸಾಧ್ಯವಾದರೆ ನೀಡಿ ಹನಿಯವರೆ...
ReplyDeleteಮಾಯಾ ಎಂಜಲೊ ಬಗೆಗೆ ಗೊತ್ತಿಲ್ಲ. ಆದರೆ ನಿಮ್ಮ ಅನುವಾದ ಓದಿದ ಬಳಿಕ ಕವನ ತುಂಬಾ ಇಷ್ಟವಾಯ್ತು. ಜೋಗಿಯವರು ಕದ್ದ ಕತೆಯ ಬಗೆಗೆ ಧೈರ್ಯದಿಂದ ಬರೆದಿರುವಿರಿ. ನಿಮಗೆ ಅಭಿನಂದನೆಗಳು.
ReplyDeleteಮತ್ತೊಂದು ವಿಷಯ: ಅನೇಕ ವರ್ಷಗಳ ಹಿಂದೆ ‘ಆನಂದ’ ಕಾವ್ಯನಾಮದ ಕತೆಗಾರರೊಬ್ಬರು ಇದೇ ಕತೆಯನ್ನು ಕನ್ನಡದಲ್ಲಿ ತಮ್ಮದೇ ಶೈಲಿಯಲ್ಲಿ ಬರೆದಿದ್ದರು ಅಂತ ನನಗೆ ಅನ್ನಿಸುತ್ತದೆ. ಅಲ್ಲದೆ, ‘ಕಸ್ತೂರಿ’ ಮಾಸಿಕದಲ್ಲಿಯೂ ಸಹ ಈ ಕತೆ ಓದಿದ ನೆನಪು. ಇವರ್ಯಾರೂ ಮೊಪಾಸಾನ ಮೂಲವನ್ನು ತಿಳಿಸಿದ್ದರೊ ಇಲ್ಲವೊ ಎನ್ನುವದು ನನಗೆ ನೆನಪಿಲ್ಲ.
ಹನಿ ಅವರೆ, it is nothing!
‘ಮಯೂರ’ ಮಾಸಪತ್ರಿಕೆ ಪ್ರಾರಂಭವಾದ ಹೊಸತರಲ್ಲಿ, ಓರ್ವ ಡಾ^ಕ್ಟರರು
ತಾವು ಮಾಡಿದ ಒಂದು difficult and original gynecological delivery ಬಗೆಗೆ ಕತೆ ತರಹದ ಲೇಖನ ಬರೆದಿದ್ದರು. ಕೆಲವೇ ತಿಂಗಳುಗಳ ಹಿಂದೆ ಅದು Readers'Digestದಲ್ಲಿ
ಬೇರೊಬ್ಬ ಯುರೋಪಿಯನ್ ಡಾ^ಕ್ಟರರಿಂದ ಬರೆದುದಾಗಿತ್ತು!
ಏನು ಮಾಡ್ತೀರಿ? ಇಂತಹ ಕಳ್ಳತನಕ್ಕೆ ಏನು ಮಾಡಲಾದೀತು?
“ನೋವು ತೊಡಗುವುದು. ಭಯ ಸುತ್ತುವರಿದ ನುಲಿತ, ನಗು..” ಇದನ್ನು ಓದುತ್ತ ನೀವೂ ಕವಿ ಎನ್ನಿಸಿತು. ನಿಮ್ಮ ಕವಿತೆಗಳನ್ನು ಪ್ರಕಟಿಸಿ..
ReplyDelete:);):)
ReplyDelete